ಅಂಧಶ್ರದ್ಧೆ ಮಾನವನ ಹುಟ್ಟುಗುಣ. ಆದರೆ ಸುಟ್ಟರೂ ಹೋಗದಂಥದ್ದೇನಲ್ಲ. ವಿವೇಚನೆಯ ಕಿಚ್ಚು ಹಚ್ಚಿದ್ದಾದರೆ ಅದು ಕಡಿಮೆಯಾಗುವುದುಂಟು. ಸುಟ್ಟ ಬೀಜ ಮೊಳಕೆಯೊಡೆಯುವುದಿಲ್ಲವಷ್ಟೇ. ಆದರೆ ಬುದ್ಧಿಗೆ ಯೋಚಿಸುವ ತಾಪತ್ರಯವೇ ನೀಡಿಲ್ಲವಾದರೆ ಒಳಗಿನ ಅಂಧಶ್ರದ್ಧೆ ಹಾಗೆಯೇ ಬೆಳೆದು, ತಾನು ನಂಬಿದ್ದೊಂದೇ ಸತ್ಯ ಎಂದು ತೋರುವುದುಂಟು.
ಅಂಧಶ್ರದ್ಧೆ ಬೆಳೆಯಲು ಇನ್ನೊಂದು ಕಾರಣವೆಂದರೆ ನಮಗೆ ಗೊತ್ತಿಲ್ಲದಿರುವ ವಿಚಾರಗಳನ್ನು ಗೊತ್ತಿಲ್ಲ ಎನ್ನಲು ಅಂಜುವುದು. ಅದರ ಬದಲಾಗಿ ನಾವು ನಂಬಿರುವ ಯಾರೋ ಹೇಳಿದ ವಿಚಾರಗಳನ್ನು ಹೇಳಿ 'ಅದು ಹಾಗೆ, ಇದು ಹೀಗೆ' ಎಂದಂದು ತಮ್ಮ ವಾದದಲ್ಲಿ ತಾವು ಗೆದ್ದೆವೆಂದು ಬೀಗುವುದು. ವ್ಯಕ್ತಿ ತನಗೆ ಗೊತ್ತಿಲ್ಲದ ವಿಚಾರಗಳಲ್ಲಿ ಕುತೂಹಲ ತಾಳಿ ಅವನ್ನು ಕಲಿಯಲೆತ್ನಿಸುವುದೆಂದರೆ ಅದು ಖರ್ಚಿನ ಕೆಲಸ. ತನ್ನ ಬುದ್ಧಿಯನ್ನೂ, ಸಮಯವನ್ನೂ ವೆಚ್ಚ ಮಾಡಬೇಕು. ಅದಕ್ಕಿಂತ ವೇದಗಳು, ಪುರಾಣಗಳು ಹೇಳಿದವು ಎಂದು ಹೇಳಿ ಬಾಯಿ ಮುಚ್ಚಿಸುವುದು ಸುಲಭವಲ್ಲವೇ. ಒಂದುವೇಳೆ ತಿರುಗಿ ಅವರು ವೇದಗಳನ್ನು ಓದಿದ್ದಾರೆಯೇ ಎಂದು ಕೇಳಿದ್ದೇ ಆದರೆ ಅವರು ಕೇಳಿಯಾರು 'ನನಗೆ ಆ ಸ್ವಾಮೀಜಿ ಹೇಳಿದ್ದು, ಆ ಮಹಾನುಭಾವರು ಹೇಳಿದ್ದು, ನಿಮ್ಮ ಅರ್ಥದಲ್ಲಿ ಏನು ಅವರು ಹೇಳಿದ್ದು ಸುಳ್ಳೋ' ಎಂದು. ಒಟ್ಟಿನಲ್ಲಿ ನಾನು ಸರಿ. ನನಗೆ ಹೇಳಿದವರೇ ತಪ್ಪು ಹೇಳಿದ್ದರೆ ವಿಚಾರ ಮಾಡದೆ ನಂಬಿದ ನನ್ನ ತಪ್ಪಲ್ಲ.
ಇಂತಿಪ್ಪ ಸಮಾಜದಲ್ಲಿ ನೀವು ಯಾವುದೇ ಮಾತಿನಿಂದ ಮತ್ತೊಬ್ಬನ ನಂಬಿಕೆಗಳನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅದನ್ನು ನಂಬಿದವ ಎಂಥ ಮೂಢನೇ ಇರಲಿ ನೀವೇ ಸೋಲೊಪ್ಪಿಕೊಂಡು ಇಂದಿನ ಕಾಲಕ್ಕೆ ಅಪ್ರಸ್ತುತ ಎನಿಸಿದ ನಂಬಿಕೆಯನ್ನೇ ಮೂಢ ಎಂದು ಕರೆದು ನಾನೂ ಗೆಲ್ಲಬಲ್ಲೆ ಎಂದು ತೋರಿಸಿಕೊಂಡರಾಯ್ತು. ಗೆಲ್ಲುವ ಹಟದಲ್ಲಿ ರೂಢಿಯಿಂದ ಬಂದಂಥ ನಂಬಿಕೆಯೊಂದನ್ನ ಮೂಢ ಎಂದಂದು ತಮ್ಮ ತಮ್ಮ ಮೌಢ್ಯವನ್ನೂ ಜಾಹೀರುಪಡಿಸಿಕೊಂಡರಾಯ್ತು. ಆದರೆ ಬರಿಯ ಮಾತಿನಿಂದಾಗದ್ದು ಕಾನೂನು ಕಟ್ಟಳೆಗಳಿಂದ ಸಾಧ್ಯವೇ?
ಒಂದಿಷ್ಟು ನಂಬಿಕೆಗಳಿಗೆ ಮರಣಶಾಸನ ಬರೆಯುವ ಇಂಥ ಒಂದು ಉಮೇದು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಿಗೆ ಬಂದಿದ್ದೂ ಆಯ್ತು. ಕಾನೂನು ಕಾಯಿದೆಗಳಿಂದ ಭ್ರಷ್ಟಾಚಾರ, ಅಪರಾಧಗಳನ್ನಂತೂ ಕಡಿಮೆ ಮಾಡಲಾಗಲಿಲ್ಲ. ಜನರ ನಂಬಿಕೆಗಳನ್ನೇ ಬದಲಿಸುವ ಎಂಬ ಹುಮ್ಮಸ್ಸು. ಸಾಮೂಹಿಕ ಆಚರಣೆಗಳ ವೇಳೆ ಮಾಡಿ-ಮೈಲಿಗೆ ನೆಪದಲ್ಲಿ ಯಾವುದೇ ಜಾತಿಯ ಜನರನ್ನು ಹೊರಗಿಡುವ, ಪಂಕ್ತಿಭೇದ ಮಾಡುವ ಸಂಪ್ರದಾಯದಿಂದಾಗಿ ಸಮಾಜದಲ್ಲಿ ಮೇಲು-ಕೀಳೆಂಬ ಭೇದ ಭಾವ ಇದೆ ಎಂದು ನಂಬಿರುವವರು ಅವರು. ಪಾಪ, ಸರ್ಕಾರದ ನೀತಿಗಳಲ್ಲೇ ಪರಿಶಿಷ್ಟ ವರ್ಗಗಳನ್ನು ಹೊರತುಪಡಿಸಿ ಮತ್ತೆಲ್ಲರೂ ಸ್ಥಿತಿವಂತರೆಂದು ನಂಬಿರುವುದು ಕಾಣಿಸಲೇ ಇಲ್ಲ. ಹೋಗಲಿ ಬಿಡಿ ಅವರ ವಿಷಯ ನಮಗ್ಯಾಕೆ ? ಆದರೆ ನನ್ನ ಪ್ರಶ್ನೆ ಇದ್ದಿದ್ದು 'ಕಾನೂನು ಕಟ್ಟಳೆಗಳಿಂದ ಜನರ ಮನಸ್ಸನ್ನು ಬದಲಾಯಿಸುವುದು ನಿಜವಾಗಿಯೂ ಸಾಧ್ಯವೇ?' ಎಂದಲ್ಲವೇ. ಹಾಗಾಗಿ ಒಂದಿಷ್ಟು ಹೇಳಬೇಕಾಯ್ತು.
ಒಂದು ವಿಷಯ ಕೇಳಿ. ನಮ್ಮ ದೇಶದಲ್ಲಿ ಮೊದಲಿಂದಲೂ ಕಸುಬಿನ ಹೆಸರಲ್ಲಿ ಕಟ್ಟಿಕೊಂಡ ಜಾತಿಗಳೂ; ಜಾತಿಗಳ, ದೇವರುಗಳ ಹೆಸರಲ್ಲಿ ಕಟ್ಟಿಕೊಂಡ ಧರ್ಮಗಳೂ ರಾಜಕೀಯ ಶಕ್ತಿಯ ಬಲದಿಂದಲೇ ಬೆಳೆದವುಗಳು, ಉಳಿದವುಗಳು. ಇಂತಿಂಥಾ ರಾಜ ಇಂತಿಂಥಾ ದೇವಾಲಯಗಳನ್ನು ಕಟ್ಟಿಸಿದ ಎಂದೋ, ಇಂತಿಂಥಾ ದೇವಾಲಯಗಳಿಗೆ ಅನುದಾನವನ್ನಿತ್ತ ಎಂದೋ ಚಿಕ್ಕಂದಿನಲ್ಲಿ ಸಮಾಜ-ವಿಜ್ಞಾನ ಪಾಠ ಪುಸ್ತಕದ ಇತಿಹಾಸದ ವಿಭಾಗದಲ್ಲಿ ಓದಿಯೇ ಇರುತ್ತೀರಿ. ಆದರೆ ಒಂದೇ ಪ್ರದೇಶದ ಜನರಲ್ಲಿ ಬೇರೆ ಬೇರೆ ರಾಜರ ಆಳ್ವಿಕೆಯಲ್ಲಿ, ಬೇರೆ ಬೇರೆ ಧರ್ಮದ ನಂಬಿಕೆಗಳನ್ನು ಹೇರುವುದು ಹೇಗೆ ಸಾಧ್ಯವಾಯಿತು ? ಬರಿಯ ಬಾಯಿ ಮಾತಿನಿಂದ ಜನರು ಹೊಸ ಮತಗಳನ್ನು ಒಪ್ಪಿಕೊಂಡರೇ? ಅದಂತೂ ಸುತಾರಾಂ ಸಾಧ್ಯವಿಲ್ಲ. ಹಾಗಾದರೆ ಇಂದು ನಮ್ಮಲ್ಲಿರುವ ಎಷ್ಟೋ ಧಾರ್ಮಿಕ ನಂಬಿಕೆಗಳು ಯಾವುದೋ ರಾಜಕೀಯ ಶಕ್ತಿಗಳು ಇಂತಹ ಕಾನೂನುಗಳನ್ನು ತಂದಿದ್ದರ ಫಲವೇ ಎಂಬ ಅನುಮಾನವೂ ಮೂಡುವುದುಂಟು. ಇದಕ್ಕೆ ಉತ್ತರ ಪಡೆಯಲೆತ್ನಿಸಿದರೆ ಮತ್ತದೇ 'ಈ ಧರ್ಮದ ಮೇಲಾದ ಅತ್ಯಾಚಾರ ಅದು, ಪರಧರ್ಮೀಯರನ್ನು ಓಲೈಸುವ ತಂತ್ರ' ಎಂದು ತಾವು ಕಣ್ಣು ಮುಚ್ಚಿ ಕಂಡ ರಾಜಕೀಯ ಪಕ್ಷಗಳ ಗುಣಗಳನ್ನು ಕುರಿತು ಭಾಷಣ ಬಿಗಿಯುವವರು ಸಿಕ್ಕಾರೇ ವಿನಃ ಒಬ್ಬನ ವ್ಯಕ್ತಿ ಸ್ವಾತಂತ್ರ್ಯದ ಬಲಿ ಎಂದು ಯಾರಿಗೂ ತೋರದು.
ಆದರೆ ಏನೇ ಹೇಳಿ, ಕಾಯಿದೆ ಬಂದರೂ, ಬಿಟ್ಟರೂ, ಕಾಯಿದೆಗಳಿಂದ ಜನ ಬದಲಾದರೂ, ಆಗದಿದ್ದರೂ ಸೋಲು ಮಾತ್ರ ಜನರದ್ದೇ. ಯಾಕೆ ಗೊತ್ತಾ, ಬದಲಾದರೆ ತಾವು ಗೆದ್ದೆವೆಂದು ಇಲ್ಲವಾದರೆ ತಾವು ಸರ್ವ ಧರ್ಮ ಸಹಿಷ್ಣುಗಳೆಂದು ಸೋಗು ಧರಿಸಿದವರು ಹಿಂದಿನವರು. ಈಗಿನವರಿಗೆ ಇಷ್ಟು ಮಾಡಲೂ ತಿಳಿಯದಿದ್ದೀತೇ ?

No comments:
Post a Comment