ಸದಾ ನಿಸರ್ಗದ ಅಷ್ಟೂ ವರ್ಣಗಳನ್ನು ನೋಡಿ ಮನ ದಣಿಯದಿದ್ದಲ್ಲಿ ತಣಿಯದಿದ್ದಲ್ಲಿ ಯಾವುದಾದರೊಂದು ಪ್ರದೇಶವನ್ನು ತನ್ನ ಪ್ರಖರ ಕಿರಣಗಳಿಂದ ಸುಟ್ಟು ಹೋಳಿಕಾ ದಹನವನ್ನೂ, ಅದರ ಪ್ರತಿಫಲವಾಗಿ ಒದಗುವ ಬೂದಿಯ ಬೂದು ಬಣ್ಣ, ಸುಟ್ಟ ಜಾಗದ ಕರಕಲಿನ ಕರಿ ಬಣ್ಣ, ಸ್ವಲ್ಪ ಶಾಖ ತಗುಲಿದ ಹುಲ್ಲಿನ ಬಂಗಾರದ ಬಣ್ಣಗಳನ್ನು ನೋಡುತ್ತಿದ್ದ ರವಿರಾಯ ಇಂದು ಕೃತಕ ಬಣ್ಣಗಳಿಂದ ಜನ ಬಣ್ಣಗೆಡುವುದನ್ನು ನೋಡಲು ಉತ್ಸುಕನಾಗಿ ಕಾಲವನ್ನು ಬಹುಬೇಗ ಸರಿಸುತ್ತಾ ಮೇಲೇರಿ ಬರುತ್ತಿದ್ದ. ನಿತ್ಯದಂತಾದರೆ ಸೂರ್ಯ ನೆತ್ತಿಯ ಮೇಲೆ ಬಂದಾಗ ಸುಮ್ಮನೆ ನಡೆದು ಹೋದರೂ ಬಳಲಿಕೆಯಾಗುವುದುಂಟು. ಆದರೆ ನೀರಲ್ಲಿ ನೆನೆಯುತ್ತಿದ್ದುದಕ್ಕೋ, ನಾಳೆಯ ದಿನ ಇದೇ ಥರ ಮತ್ತೆ ಕುಣಿಯುವ ಅವಕಾಶ ದಕ್ಕದು ಎಂಬುದು ಎಲ್ಲರಿಗೂ ಗೊತ್ತಿದ್ದುದಕ್ಕೋ ಜನರಲ್ಲಿ ಸುಸ್ತು ಕಾಣಿಸುತ್ತಿರಲಿಲ್ಲ. ಮಧ್ಯೆ ಒಮ್ಮೆ ಹೊರ ಹೋಗಿ ನೀರು ಕುಡಿದೋ, ಇಲ್ಲವೇ ಏನನ್ನಾದರೂ ತಿಂದು ಬಂದು ಮತ್ತೆ ಕುಣಿತ ಮುಂದುವರೆಯುತ್ತಿತ್ತು. ಈ ಮಧ್ಯೆ ನನಗೂ ನನ್ನ ಜೇಬಿನಲ್ಲಿ ಸುಮಾರು ಒಂದೆರೆಡು ಗಂಟೆಗಳಿಂದ ನೀರಲ್ಲಿ ನೆನೆದು ಛಳಿಯಿಂದ ಮುದ್ದೆಯಾಗಿ ಕುಳಿತ ನೂರರ ನೋಟೊಂದರ ನೆನಪಾಯ್ತು. ಇನ್ನೂ ಹೊತ್ತು ಕಳೆದರೆ ಅದರ ಜೀವ ಯಾತಕ್ಕೂ ಉಪಯೋಗ ಬರದೆ ಹೋದೀತು, ಅಲ್ಲದೆ ಹಿಂತಿರುಗುವ ವೇಳೆಗೆ ನನ್ನ ಖುಷಿಯಲ್ಲಿ ಅದರ ಅಸ್ತಿತ್ವವೇ ನಾಶವಾದೀತೆಂದು ತೋರಿ ಅದನ್ನು ಮಾರಾಟ ಮಾಡಲು ನಿಶ್ಚಯಿಸಿದೆ. ಮಾರಿದ್ದಕ್ಕೆ ಒಂದು ಲೀಟರ್ ಸ್ಲೈಸ್ ಹಾಗೂ ಮೂರು ವಡಾ-ಪಾವ್ ನಷ್ಟು ಸಂಪಾದನೆಯಾಯಿತು. ನಮ್ಮ ಗುಂಪಿನ ಬಹುತೇಕ ಎಲ್ಲರ ಹೊಟ್ಟೆಗೂ ತುತ್ತು ವಡಾ-ಪಾವ್ ಹಾಗೂ ಗುಟುಕು ಮಾವಿನ ರಸ ಸೇರಿದಾಗ ಆ ನೋಟಿಗೂ ತನ್ನ ಜೀವನದ ಸಾರ್ಥಕತೆಯ ಅರಿವಾಗಿರಬೇಕು. ಅದರ ಮೇಲೊಂದು ನಗು ಮುಖವನ್ನು ನಾನು ಕಂಡೆ.
ತಿರುಗಿ ಬಂದು ನೆರೆದ ಜನರಲ್ಲಿ ಒಂದಾದೆ. ಹಾಡುಗಳು ಬದಲಾಗುತ್ತಿದ್ದರೂ ಮುಖ್ಯವಾಹಿನಿಯಲ್ಲಿ ಅದೇ ಡ್ಹುಬ್ ಡ್ಹುಬ್ ಸದ್ದು. ಬಾಕಿ ಯಾವುದೇ ಚಟುವಟಿಕೆಗಳಲ್ಲಿ ವ್ಯತ್ಯಾಸವಿಲ್ಲ. ಲೈಸೆನ್ಸು ಅವಧಿ ವಿಸ್ತರಿಸಿದ್ದರಿಂದಲೋ, ಹಾಡುಗಳ ಸಂಗ್ರಹ ಕಡಿಮೆಯಿದ್ದೋ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಮೊದಲು ಕೇಳಿದ ಹಾಡುಗಳೇ ಪುನರಾವರ್ತನೆಯಾಗತೊಡಗಿದವು. ಜನರ ಉತ್ಸಾಹಕ್ಕೆ ಇದೇನೂ ಧಕ್ಕೆ ತರಲಿಲ್ಲ. ಇದರ ಪರಿವೆಯೇ ಇಲ್ಲದಂತೆ ಬಣ್ಣಗಳೆರಚಾಟ, ಕುಣಿತ ಅದೇ ಭರದಲ್ಲಿ ಸಾಗುತ್ತಿತ್ತು.
ಈ ನಡುವೆ ಅದ್ಯಾರಿಗೋ ಬಣ್ಣ ಹಚ್ಚ ಹೊರಟ ಆಕೆಯ ಕೈ ನನಗೆ ತಾಕಿತು. ಇಂಥ ಸಂದರ್ಭದಲ್ಲಿ ಅರಿವಿದ್ದೋ, ಇಲ್ಲದೆಯೋ ಬಣ್ಣ ಹಚ್ಚಿಸಿಕೊಂಡಾತ(ಕೆ) ತಿರುಗಿ ಬಣ್ಣ ಹಚ್ಚುವ ಮಟ್ಟದ ಪ್ರತಿಭಟನೆ ಹಚ್ಚಿದಾತನ(ಕೆಯ) ಪರಿಚಯವಿದ್ದರೂ, ಇಲ್ಲದಿದ್ದರೂ ಆ ದಿನದ ಮಟ್ಟಿಗೆ ಜನರಲ್ಲಿ ಸಂತೋಷ ತರುವುದನ್ನು ಇದುವರೆಗೆ ಕಂಡಿದ್ದರಿಂದ ನಾನೂ ಅದನ್ನೇ ಮಾಡಹೋದೆ. ಇತ್ತೀಚಿನ ದಿನಗಳಲ್ಲಿ ಶೀಘ್ರ ಪ್ರತಿರೋಧ ನನ್ನ ಸ್ವಭಾವವಲ್ಲ. ಎಷ್ಟು ಸಾಧ್ಯವೋ ಅಲ್ಲಿಯವರೆಗೆ ತಾಳ್ಮೆ ವಹಿಸಿಯೇನು. ಎಷ್ಟೇ ಮಳೆ ಸುರಿದರು ಅಲುಗಾಡದ ಗಿರಿಯಂತೆ ಇದ್ದೇನು. ಎಂದು ಗಿರಿ ಪ್ರತಿಸ್ಪಂದಿಸಿತೋ ಅಂದು ಅದರ ನಾಶ, ಕೊಚ್ಚಿ ಬರುವ ನೀರಲ್ಲಿ ತನ್ನನ್ನು ತಾನು ಕಳೆದುಕೊಂಡು ತೊಳೆದು ಹೋದೀತು. ಆದರೆ ಬೆಳಗ್ಗಿನಿಂದ ಆಡುತ್ತಿದ್ದ ನಾಟಕದ ಮತ್ತೊಂದು ಅಂಕ ಇದಾಗಿರುವಾಗ, ಇಷ್ಟರವರೆಗೂ ನಟಿಸಿ ಈಗ ಸುಮ್ಮನಿರಲಾದೀತೆ ? ಬಣ್ಣದ ಪಾಕೆಟ್ಟಿಗೆ ಕೈ ಹಾಕಿ, ಗುಲಾಲು ಮೆತ್ತಿದ ಕೈಯನ್ನು ಅವಳೆಡೆಗೆ ಎತ್ತಿದೆ. ಎತ್ತಿದ ಕೈ ಹಾಗೇ ಇಳಿಸುವ ಮನಸ್ಸಾಗದೆ ಬಣ್ಣ ಹಚ್ಚಿದೆ. ಎಲ್ಲಿ ತಾಗಿತೋ ? ತಿರುಗಿ ನೋಡೋ ಅಷ್ಟು ಚೈತನ್ಯ ಮನಸ್ಸಿನಲ್ಲಿರಲಿಲ್ಲ. ಈಗ ನಾನು ಬಣ್ಣ ಹಚ್ಚಿದುದರ ಹಗೆ ತೀರಿಸಿಕೊಳ್ಳಲು ಆಕೆ ಮತ್ತೆ ಬಣ್ಣ ಹಿಡಿದು ಬಂದಳು. ಈ ಬಾರಿ ನಾನು ಅಲುಗಲಿಲ್ಲ, ಕೊಸರಿಕೊಳ್ಳಲಿಲ್ಲ. ತಪ್ಪು ಮಾಡಿದ ವಿದ್ಯಾರ್ಥಿ ಅದಕ್ಕೆ ಶಿಕ್ಷಕಿ ತನಗೆ ಕೊಡಲಿರುವ ಶಿಕ್ಷೆ ಏನೆಂಬ ಅರಿವಿದ್ದಾಗ ತಲೆ ತಗ್ಗಿಸಿ ಅದಕ್ಕೆ ಸಿದ್ದವಾಗಿ ವಿಧೇಯತೆಯಿಂದ ನಿಲ್ಲುವಂತೆ ನನ್ನನ್ನು ನಾನು ಒಪ್ಪಿಸಿಕೊಂಡೆ. ತಾಗಿದ ಬಣ್ಣ ತೊಳೆಯಲು ಪಂಪುದೇವ ಇದ್ದನಲ್ಲ.!
ಹೊತ್ತು ಸರಿಯುತ್ತಿತ್ತು. ಲೈಸೆನ್ಸು ಅವಧಿ ಮುಗಿಯುತ್ತಾ ಬಂದಿತ್ತು. ಆದರೇನು, ಜನ ಬಹಳಷ್ಟು ಜಮಾಯಿಸಿದ್ದರಿಂದ, ಎಷ್ಟೇ ದಂಡ ತೆತ್ತು ಇನ್ನೊಂದು ತಾಸು ಕಾರ್ಯಕ್ರಮವನ್ನು ವಿಸ್ತರಿಸಿದರೂ ಆಯೋಜಕರಿಗೆ ನಷ್ಟವಿಲ್ಲ ಎಂದು ತೋರಿದ್ದರಿಂದ, ಕಾವಲಿದ್ದ ಪೋಲೀಸರ lunch ಟೈಮಿನಲ್ಲಿ ಒಂದಿಷ್ಟು ಲಂಚ ತಿನ್ನಿಸಿ ಗಡುವನ್ನು ಇನ್ನೂ ಒಂದು ತಾಸು ವಿಸ್ತರಿಸಿದ್ದಾಯಿತು. ಎಷ್ಟೆಂದರೂ ಲಂಚದ ದಾರಿ ಸಲೀಸು. ದೂರ ಕಡಿಮೆ. ಹೀಗೆ ನಾಳೆಯ ಚಿಂತೆ ಮರೆತು ಇಂದಿಗಾಗಿ ಬಾಳುವವರಿಗೆ ಲಂಚದ ರಾಜ್ಯವೇ ಸೊಗಸು ಹೊರತು ಇಂದು ನಾಳೆಯ ಯೋಚನೆ ಮಾಡಿ, ನಾಳೆ ಬಂದಾಗ ನಾಡಿದ್ದನ್ನು ಯೋಚಿಸುತ್ತಾ ಕುಳಿತು, ಎಂದಾದರೊಂದು ದಿನ ಸಿಗಲಿರುವ ಸುಖದ ಯೋಚನೆಯಲ್ಲಿ ಮುಳುಗಿರುವವರಿಗೆ ಲಂಚ ತುಚ್ಛವಾಗಿ ಕಂಡೀತು.
ಹೀಗೆ ದೊರೆತ ಹೆಚ್ಚುವರಿ ಅವಧಿಯಲ್ಲಿ ಮೂರ್ನಾಲ್ಕು ಹುಡುಗಿಯರು ವೇದಿಕೆ ಹತ್ತಿ ಕುಣಿಯತೊಡಗಿದ್ದರು. ಕೆಳಗಿದ್ದ ಕೆಲವು ಪುಟ್ಟ ಮಕ್ಕಳನ್ನು ಮೇಲೆ ಹತ್ತಿಸಿ ನೃತ್ಯದಲ್ಲಿ ತೊಡಗಲು ಪ್ರೋತ್ಸಾಹಿಸಲಾಯಿತು. ಕೆಲವರಲ್ಲಿ ಕೆಲವರು ಚೆನ್ನಾಗಿ ಕುಣಿದರು. ಇನ್ನೂ ಕೆಲವರು ಕೆಳಗೆ ತಮ್ಮ ತಂದೆ-ತಾಯಿ ಕುಣಿದು ತೋರಿದುದನ್ನು ಅನುಕರಿಸಿದರು. ಒಂದು ಮಗು ಸುಮಾರು ನಾಲ್ಕು ವರ್ಷ ಪ್ರಾಯವಿದ್ದೀತು; ಏನೆಂದರೂ ಕುಣಿಯಲು ಕೇಳಲಿಲ್ಲ. ಬೆಳಗ್ಗಿನಿಂದ ಆಯೋಜಕರೇ ಒದಗಿಸುತ್ತಿದ್ದ ಬಟ್ಟೆಯ ತುಂಡೊಂದರಿಂದ ಅದಕ್ಕೆ ಸನ್ಮಾನ ಮಾಡಿದರೂ ಅದಕ್ಕೆ ಖುಷಿಯಾಗಲಿಲ್ಲ. ಬದಲು ಅಷ್ಟು ಜನರ ಮುಂದೆ ತನ್ನನ್ನು ಸಣ್ಣ-Man ಆಗಿ ತೋರಿಸಿದುದು ಅದಕ್ಕೆ ಬೇಜಾರು ತರಿಸಿತೇನೋ. ಕುಣಿಯಲು ಪೋಷಕರ ಒತ್ತಾಯ ಹೆಚ್ಚಿದಾಗ ಆ ಮಗುವಿನ ಕಣ್ಣು ಹನಿಗೂಡಿತೇ ಹೊರತು ಕಾಲು ಅಲುಗಲಿಲ್ಲ. ಅಂತೂ ಕೊನೆಗೆ ಆ ಮಗುವಿನ ತಂದೆ ಬಂದು ಅವನನ್ನು ಕೆಳಗಿಳಿಸಿಕೊಂಡರು. ಈಗ ಆ ಮಗುವಿನಲ್ಲಿ ಸುರಿಯುವ ನೀರಿನಲ್ಲಿ ಮನದುಂಬಿ ನೆನೆಯುವ, ಮೇಲಿಂದ ಉದುರುವ ಒಂದೊಂದು ನೀರ ಹನಿಯ ಚಿಟ-ಪಟ ಸದ್ದನ್ನು ಕಿವಿಯೊಳಗೆ ತುಂಬಿಕೊಳ್ಳುವ, ನೆಲದ ಮೇಲೆ ಹರಡಿಕೊಂಡಿದ್ದ ಬಣ್ಣ ಬಣ್ಣದ ನೀರ ಮೇಲೆ ಕುಪ್ಪಳಿಸಿ ಮತ್ತೆ ಮೇಲೆಬ್ಬಿಸುವ ಉತ್ಸಾಹ ತುಂಬಿ ನಿಂತಿತ್ತು. ಬಣ್ಣಗಳ ಭಾರಕ್ಕೋ, ಒಮ್ಮೆ ನೆಲ ಮುಟ್ಟಿದ ನೀರಿಗೆ ಭೂಮಿಯ ಮೇಲೆ ಉಂಟಾದ ಪ್ರೀತಿಯ ಭಾರಕ್ಕೋ ನೀರು ಮೇಲೇರಲಿಲ್ಲ. ಅಪ್ಪ-ಅಮ್ಮನಿಗೆ ಮನಸ್ಸಿಲ್ಲದಿದ್ದರೂ ಹಟ ಮಾಡಿ ಆಡ ಬಂದ ಆ ಮಗುವಿನ ಕಣ್ಣಿಂದ ಬೇಡೆಂದರೂ ಜಿನುಗುತ್ತಿದ್ದ ಹನಿಗಳು ಕೆಳಗಿಳಿಯುವುದು ಇನ್ನೂ ನಿಂತಿರಲಿಲ್ಲ.
ಸ್ವಲ್ಪ ಹೊತ್ತಲ್ಲಿ ತನ್ನ ಆಶಯಗಳು ಫಲಿಸಿದಂತೆ ಮಗುವಿನ ಮುಖ ಸಂತೋಷದ ಬುಗ್ಗೆಯಾಗಿತ್ತು.ಅಷ್ಟು ಹೊತ್ತು ನನ್ನನ್ನೇ ಮರೆತು, ಮಧ್ಯೆ ನೆನಪಾದರೂ ಮತ್ತೆ ಮರೆತು ಆ ಮಗುವನ್ನೇ ನೋಡುತ್ತಾ ನಿಂತಿದ್ದ ನನಗೆ ಸುರಿಯುವ ನೀರಿನಿಂದ ದೂರ ಸರಿದು ನಿಂತಿದ್ದರ ನೆನಪು ಬಂತು. ತನ್ನ ಸ್ವಭಾವಕ್ಕೆ ಸಲ್ಲದ್ದನ್ನು ಆ ಮಗು ವಿರೋಧಿಸುತ್ತಿದ್ದುದ್ದನ್ನು ಕಂಡಾಗ 'ನಾನೂ ಯಾಕೆ ಹೀಗೆ ಮಾಡಲಿಲ್ಲ ?' ಎಂಬ ಪ್ರಶ್ನೆ ಏಳುತ್ತಿತ್ತು. ಮುಂದೆ ಬರಲಿರುವ ಪ್ರಶ್ನೆಗಳನ್ನು ನೆನೆದಲ್ಲವೇ ಇಷ್ಟು ಹೊತ್ತು ನಾಟಕವಾಡಿದ್ದು. 'ಇದು ನನ್ನ ಸ್ವಭಾವವಲ್ಲ ಎಂದು ಧಿಕ್ಕರಿಸಿದ್ದರೆ ಏನಾಗುತ್ತಿತ್ತು ?' ಎಂದು ಯೋಚಿಸುತ್ತಲೇ ನಾನು ಮತ್ತೆ ನೀರಿನಡಿ ಹೋದೆ. ಸ್ವಲ್ಪ ಹೊತ್ತು ನೀರಲ್ಲಿ ಕುಣಿದು, ದಣಿದು, ಮನ ತಣಿದ ಮಗು ಹೊರಟು ಹೋಗಿತ್ತು. ಮುಂದೆ ಕಾರ್ಯಕ್ರಮ ಮುಗಿಯುವಷ್ಟೂ ಹೊತ್ತು ಆ ಮಗುವನ್ನು ನನ್ನಲ್ಲಿ ಆವಾಹಿಸಿಕೊಂಡವನಂತೆ ನಾನು ನಾನಾಗೇ ಇದ್ದು ಹೊರಬಂದೆ.
ಹೊರ ಬಂದ ಮೇಲೆ ಎಲ್ಲರಿಗೂ ಇಷ್ಟು ಹೊತ್ತೂ ಪರಿಚಯ ಇಲ್ಲದವರೊಡನೆ ಹೋಳಿ ಆಚರಿಸಿಕೊಂಡ ತಪ್ಪಿನ ಅರಿವಾದಂತಿತ್ತು. ಪ್ರಾಯಶ್ಚಿತ್ತವಾಗಿ ಎಲ್ಲರೂ ತಮ್ಮ ತಮ್ಮ ಹೆಸರು ಹೇಳಿಕೊಂಡು, ನೆನಪಿಗೆ ಫೋಟೋ ಮುಂದೆ ನಗುವಿನ ಮುಖವಾಡ ಧರಿಸಿ ನಿಂತು ಎಲ್ಲರೂ ನಮ್ಮ ನಮ್ಮ ಗೂಡು ಸೇರಿದೆವು. ಸುಮಾರು ನಾಲ್ಕು ತಾಸು ನೆನೆದ ಮೈ ಚೂರು ಒಣಗಿತ್ತು. ಮತ್ತೆ ನೆನೆಯುವ ಮನಸ್ಸಾಗಿ ಸ್ನಾನದ ಮನೆ ಹೊಕ್ಕೆ. ಮತ್ತೆ ಮತ್ತೆ ಸೋಪು ಹಾಕಿ ತಿಕ್ಕಿಕೊಂಡೆ. ನಿತ್ಯದ ಸ್ನಾನದ ಲೆಕ್ಕದಲ್ಲೊಮ್ಮೆ, ಬಣ್ಣ ಬಿಡಲು ಮತ್ತೊಮ್ಮೆ, ಆಕೆಯ ಸ್ಪರ್ಶದ ಬಣ್ಣವನ್ನಳಿಸಲು ಮಗದೊಮ್ಮೆ ಇನ್ನೂ ಏನೇನು ಕಾರಣಗಳಿದ್ದವೋ ನೆನಪಿಗೆ ಬಾರದು. ಎಲ್ಲಾ ಬಣ್ಣಗಳನ್ನು ತೊಳೆದು ಕಳೆದು ಬರುವ ವೇಳೆಗೆ ಆಕೆಯ ಹೆಸರು ಮರೆತರೂ, ಬಣ್ಣ ಮೆತ್ತಿದ ಅವಳ ನೆನಪುಗಳು ಮರೆಯುವ ಮುನ್ನ ಬರೆಯಲು ಕುಳಿತೆ.

ಬಣ್ಣಗಳಲ್ಲಿ ಬಣ್ಣಗೆಟ್ಟ ಮುಖಗಳು |
******************************ಮುಗಿಯಿತು******************************
ಎಷ್ಟೇ ಮಳೆ ಸುರಿದರು ಅಲುಗಾಡದ ಗಿರಿಯಂತೆ ಇದ್ದೇನು. ಎಂದು ಗಿರಿ ಪ್ರತಿಸ್ಪಂದಿಸಿತೋ ಅಂದು ಅದರ ನಾಶ. ವಾಕ್ಯ ಇಷ್ಟವಾಯಿತು. ಆದರೆ ಎಷ್ಟು ದಿನ ಅ೦ತ ಸಹಿಸಿಕೊಳ್ಲೋದು...? ನೂರು ದಿನ ಇಲಿಯ೦ತೆ ಬಾಳುವ ಬದಲು ಮೂರು ದಿನ ಹುಲಿಯ೦ತೆ ಬದುಕು ಎ೦ದರು ನಮ್ಮ ಕ್ರಾ೦ತಿಕಾರಿಗಳು(ನ೦ಗೊತ್ತಿಲ್ಲ ಯಾಕೆ ಈ ವಾಕ್ಯ ಬಳಸಿದೆ ಎ೦ದು). ಹೋ... ಎಷ್ಟೇ ಕಷ್ಟ ಬ೦ದರು ಸಹಿಸಿಕೊ ಬೇಕು(ಧೃಡ ನಿಶ್ಚಯ ಅಂತಾರಲ್ಲ) ಎ೦ಬುದು ನಿನ್ನ ಅಭಿಪ್ರಾಯವೇನು...?
ReplyDelete-ಅನಾಮಿಕನಲ್ಲ ...!!!
ನಿಮ್ಮ ಹೆಸರು ತಿಳಿಸಿದ್ದರೆ ಸಂತೋಷವಿತ್ತು. ಅದರರ್ಥ ಈಗ ನಾನು ಸಂತುಷ್ಟನಾಗಿಲ್ಲ ಎಂದಲ್ಲ. ನಿಮ್ಮ ಹೆಸರನ್ನು ಬೇಕಾದಲ್ಲಿ ಬಳಸಿ ಬೇಡದಲ್ಲಿ ಬಳಸದಿರುವಷ್ಟು ಸ್ವಾತಂತ್ರ್ಯ ನಿಮಗೂ ಇರುವುದರಿಂದ ಆ ವಿಷಯವಾಗಿ ಹೆಚ್ಚಿಗೆ ಹೇಳಲಾರೆ.
Deleteಒಂದೇ ಶಬ್ದದಲ್ಲಿ ಉತ್ತರಿಸುವುದಾದರೆ 'ಗೊತ್ತಿಲ್ಲ'.
ನನ್ನ ಮನದಲ್ಲಿ ಮೂಡುವ ಭಾವನೆಗಳನ್ನು, ಪ್ರಶ್ನೆಗಳನ್ನು, ಅದಕ್ಕೆ ನಾನೇ ಕಂಡುಕೊಂಡ ಉತ್ತರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುವಾಗ ಬಹುತೇಕ ಸಂದರ್ಭದಲ್ಲಿ ಯಾವುದೇ ತರ್ಕ ಮನದಲ್ಲಿ ಮೂಡುವುದಿಲ್ಲ. ತರ್ಕ ಮನದಲ್ಲಿ ಮೂಡಿದಾಗ ಭಾವನೆಗಳು ಘಾಸಿಗೊಳಗಾಗುತ್ತವೆ. ಭಾವ ಹಾಗೂ ತರ್ಕಗಳಲ್ಲಿ ಯಾವುದು ಶ್ರೇಷ್ಠ ? ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಇನ್ನೊಂದು ದಿಕ್ಕಿನಲ್ಲಿ ಚಿಂತಿಸಲು ದಾರಿ ತೋರಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಶ್ನೆಗೆ ತಕ್ಕ ಉತ್ತರ ನಾನು ನೀಡಿಲ್ಲವಾದರೂ, ಕೊಟ್ಟ ಉತ್ತರ ನಿಮಗೆ ಸಮಾಧಾನ ತಂದಿದ್ದೀತು ಎಂದುಕೊಳ್ಳುತ್ತೇನೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
Deleteನೀನು ನನ್ನನ್ನು "ನೀನು" ಎಂದು ಕರೆಯಬಹುದು, ನಾನು ಕೂಡ ನಿನ್ನ ವಯಸ್ಸಿನವನೇ.
ನಿನಗೂ ಮತ್ತು ನಿನ್ನ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು :)
-ಅನಾಮಿಕನಲ್ಲ ...!!!