ನವೆಂಬರ ಮಾಸ ಕಳೆದು ಬಹಳ ಕಾಲವಾಯಿತು. ಮುಂದಿನದು ಬರಲು ಅದಕ್ಕಿಂತ ಹೆಚ್ಚಿನ ಅವಧಿ ಇದೆ. ಅಂಥ ಸಂದರ್ಭಗಳಲ್ಲಿಲ್ಲದ ಕನ್ನಡಾಭಿಮಾನ ಈಗ್ಯಾಕೆ ಅಂತ ನಿಮಗೆಲ್ಲರಿಗೂ ಅಲ್ಲದಿದ್ದರೂ ಕೆಲವರಿಗಾದರೂ ಅನ್ನಿಸಿದ್ದೀತು. ನವೆಂಬರ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದವರಿಗೆ ಕನ್ನಡ ರಾಜ್ಯೋತ್ಸವ ಬಂದಿತೆಂದೂ ಅನ್ನಿಸಿದ್ದೀತು. ಕರ್ನಾಟಕದಿಂದ ಹೊರಗಿರುವಾತನಿಗೆ ಭಾಷೆಯ ಮೇಲಿನ ಅಭಿಮಾನದ ಸೋಗು ಹೆಚ್ಚಿದೆ ಎಂದೂ ಅನ್ನಿಸಿದ್ದೀತು. ಅಂತೆಲ್ಲಾ ಊಹಾಪೋಹಗಳಿಗೆ ನೀವು ನೀವೇ ಜವಾಬ್ದಾರರೇ ಹೊರತು ನಾನಲ್ಲ. ಭಾರತ ದೇಶಕ್ಕಿಂತ ನಮ್ಮ ರಾಜ್ಯವೇ ದೊಡ್ಡದು ಎನ್ನುವಂತೆ ಹೆಸರಿರಿಸಿಕೊಂಡ ಸೊಕ್ಕಿನ ಜನರ ನೆಲದಲ್ಲಿ ಬಾಳುತ್ತಿರುವ ನನಗೆ ಮಹಾರಾಷ್ಟ್ರದ ರಾಜ್ಯೋದಯ ದಿನ ಹತ್ತಿರವಾದಂತೆ, ಸುಮಾರು ಒಂದೂವರೆ ವರ್ಷದಿಂದ ಜನ್ಮವೆತ್ತ ನಾಡಿನಿಂದ ಹೊರಗಿದ್ದು, ಕನ್ನಡ ನುಡಿಯುವಾಗಲೂ ಕಾಲು ಭಾಗದಷ್ಟು ಹಿಂದೂಸ್ತಾನಿ ಶಬ್ದಗಳೇ ನಾಲಿಗೆ ತುದಿಗೆ ಬಂದು ನಿಲ್ಲುವ ಈ ದಿನಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಕೆರಳಿತೋ ಎಂದು ನೀವು ಒಂದಿನಿತು ಶಂಕಿಸಲಡ್ಡಿಯಿಲ್ಲ. ಕನ್ನಡದ ಬಗ್ಗೆ ನನ್ನದು ಕೆರಳಿದ ಅಭಿಮಾನವೋ, ಅರಳಿದ ಅಭಿಮಾನವೋ, ಒಂದೂವರೆ ವರ್ಷದಲ್ಲಿ ಅಳಿದು-ಉಳಿದ ಅಭಿಮಾನವೋ ಎಂಬಿತ್ಯಾದಿ ಮೂರು ಪ್ರಶ್ನೆಗಳ ಜೊತೆಗೆ ನೂರು ಪ್ರಶ್ನೆಗಳು ಮೂಡುವಾಗ, ನನಗೇ ಉತ್ತರಗಳನ್ನು ಕಂಡುಕೊಳ್ಳಲಾಗದವನು ನಿಮ್ಮ ಪ್ರಶ್ನೆಗಳ ಒಳ ಹೊಕ್ಕು ಉತ್ತರ ಹುಡುಕಿಯೇನು ಎಂಬ ಖಾತ್ರಿ ಇಲ್ಲವಾದರೂ ಲೇಖನದ ಕೊನೆ ಮುಟ್ಟುವ ವೇಳೆಗೆ ನಿಮ್ಮನ್ನು ಇನ್ನೊಂದು ಪ್ರಶ್ನೆಯ ತುದಿಯಲ್ಲಿ ನಿಲ್ಲಿಸಿಯೇನು.
ಬೆಳಿಗ್ಗೆ ೧೧.೩೦ರ ವೇಳೆಗೆ ತನ್ನ ಬ್ಲಾಗಿನಲ್ಲಿ ಬರೆದಿರುವ ಲೇಖನವೊಂದನ್ನು ಓದುವಂತೆ ನನ್ನ ರೂಮ್-ಮೇಟ್ ನಿಂದ ಕರೆ ಬಂತು. ಹಿಂದೆ-ಮುಂದೆ ಆಗಿನ, ಈಗಿನ, ಯಾವಾಗಿನ ಇತ್ಯಾದಿ ಪ್ರತ್ಯಯ ಸೇರಿಸದೆ ರೂಮ್-ಮೇಟ್ ಎಂದೆನಾದರೆ ಅದು ನಾನು ಇಂಜಿನಿಯರಿಂಗ್ ಓದುವಾಗಿನ ನಾಲ್ಕು ವರ್ಷದ ರೂಮ್-ಮೇಟ್. ಅವನು ಸಮಯ ಸಿಕ್ಕಾಗ ಬ್ಲಾಗೊಂದನ್ನು ಶುರುಮಾಡಿದ್ದಾನೆ.ಎಲ್ಲರೂ ಸಮಯ ಸಿಕ್ಕಾಗಲೇ ಸಲ್ಲದ ತರಲೆ ಶುರು ಮಾಡಿಕೊಳ್ಳುವುದು ಎಂಬ ನಿಮ್ಮ ತಲೆಹರಟೆ ಸದ್ಯಕ್ಕೆ ಬೇಡ. ಬ್ಲಾಗಿನ ಹೆಸರೇ ಸಮಯ ಸಿಕ್ಕಾಗ; ಸ್ವಲ್ಪ ಮಟ್ಟಿಗೆ ಯೋಚಿಸಿಯೇ ಹೆಸರಿಟ್ಟಿದ್ದು. ತಾನು ಸಮಯ ಸಿಕ್ಕಾಗ ಬರೆಯುವುದು; ಓದುಗರು ಸಮಯ ಸಿಕ್ಕಾಗ ಓದುವುದು ಅದರ ಆಶಯ ಎಂದರೂ ತಪ್ಪಾಗಲಿಕ್ಕಿಲ್ಲ.
ಮೊದಲ ಮಾತು ಎಂದು ತೊದಲು ಮಾತುಗಳನ್ನಾಡಿ, ಮುಂದೆ ಆಡಲೇಬೇಕಾದ ಮಾತುಗಳಿಗೆ ಅವಕಾಶವಾಗದೆ ಹೋದೀತೆಂದೋ ಏನೋ ಮುನ್ನುಡಿ ಬರೆಯುವ ಗೋಜಿಗೆ ಹೋಗದೆ ರಾಜ್ಯದಲ್ಲಿ, ರಾಜ್ಯ ರಾಜಧಾನಿಯಲ್ಲಿ ರಾಜ್ಯಭಾಷೆಗೆ ಒದಗಿರುವ ಗತಿಯನ್ನು ಕುರಿತ ಬರಹ ಅದು. ಆ ಗತಿ ಸದ್ಗತಿಯೋ, ದುರ್ಗತಿಯೋ ಎಂಬುದು ನನಗಿಂತ ಚೆನ್ನಾಗಿ ನಿಮಗೇ ಗೊತ್ತು. ಆದರೆ ಇಂದು ಕನ್ನಡ ಉಳಿದಿರುವುದು ಯಾರ ಕೈಯಲ್ಲಿ ಎಂಬುದನ್ನು ತನಗೆ ಕಂಡಂತೆ ಹೇಳಿ, ಇನ್ನೂ ಹೆಚ್ಚಿನದಕ್ಕೆ ಎಲ್ಲರ ಯೋಚನೆಗೆಂದು ಪ್ರಶ್ನೆಯೊಂದನ್ನು ಮುಂದಿಟ್ಟಾಗ; ಪ್ರಶ್ನೆಗೆ ಉತ್ತರಿಸುವುದಕ್ಕಿಂತ ಮರುಪ್ರಶ್ನೆ ಕೇಳುವುದೇ ಇಂದಿನ ಬುಧ್ಧಿವಂತಿಕೆಯ ಲಕ್ಷಣ ಎಂದುಕೊಂಡಿದ್ದಕ್ಕೆ ಈ ಕನ್ನಡಾಭಿಮಾನದ ಉದಯ ಸಾಧ್ಯವಾಗಿದ್ದು.
ಅನ್ನ ಕೊಡೋ ಮಣ್ಣು ಬೇಡವಾದ ಮನುಷ್ಯನಿಗೆ ತಾನು ಚಿಕ್ಕಂದಿನಲ್ಲಿ ತೊದಲು ಮಾತುಗಳನ್ನಾಡಿದ ಭಾಷೆ ಅನ್ನ ಕೊಟ್ಟೀತೇ ? ಓದು ಬರಹ ಅರಿಯದ ಮಂದಿಗೆ ತಮ್ಮ ಮಕ್ಕಳು ತಮ್ಮಂತಾಗುವುದು ಬೇಡ; ನಾಲ್ಕಕ್ಷರ ಕಲಿತು, ಒಂದು ನೌಕರಿ ಹಿಡಿದು ತನ್ನ ಬಾಳನ್ನು ರೂಪಿಸಿಕೊಳ್ಳಲಿ; ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಬೆಳೆದು, ಮಣ್ಣಲ್ಲೇ ಸಾಯುವ ಎರೆಹುಳದ ಬದುಕು ತಮ್ಮ ಮಕ್ಕಳಿಗೆ ಬೇಡ ಎಂಬಾಸೆ. ತೀರಾ ಓದಿದ ಜನರಿಗೆ ತಮ್ಮ ಮಕ್ಕಳು ತಮ್ಮಂತೆಯೇ ದೊಡ್ಡ ಇಂಜಿನಿಯರ್ ಆಗಬೇಕು, ವೈದ್ಯನಾಗಬೇಕು; ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಬೆಳೆದು, ಮಣ್ಣಲ್ಲೇ ಸಾಯುವ ಎರೆಹುಳದ ಬದುಕು ತಮ್ಮ ಮಕ್ಕಳಿಗೆ ಬೇಡ ಎಂಬಾಸೆ. ಈ ಒಂದೇ ಮಾತು ಮತ್ತೆ ಮತ್ತೆ ಯಾಕೆ ಹೇಳಿದೆ ಅಂದ್ರೆ ಎಲ್ಲಾ ತಂದೆ ತಾಯಿಯರ ಮೂಲ ಆಶಯ ಒಂದೇ, ಆ ದಾರಿಯಲ್ಲಿ ಅವರ ಬೇಕು ಬೇಡಗಳು ಹೇಗೆ ಬೇರೆ ಬೇರೆ ಎಂದು ತಿಲಿಸಲಷ್ಟೇ. ಹೀಗಿರುವಾಗ ಅವರಿಗೆ ತಮ್ಮ ಮಕ್ಕಳು ಮಮ್ಮಿ, ಡ್ಯಾಡಿ ಎಂದೆನ್ನುತ್ತಾ ಈಜಿಪ್ತಿನ ಪಿರಮಿಡ್ಡುಗಳಡಿಯಲ್ಲಿ ಕೊಳೆಯುತ್ತಿರುವ ಸತ್ತ ಹೆಣ ನೀವು ಎಂದು ಬಾರಿ ಬಾರಿ ಸಾರಿದರೂ ಅದೇ ಆಪ್ಯಾಯಮಾನವಾಗಿರುತ್ತದೆ. ಇಲ್ಲದಿದ್ದಲ್ಲಿ ಮಗನ ಇಂಗ್ಲೀಷು ಕಲಿಕೆ ಮುಂದೆ ಸಾಗಿಲ್ಲ ಎಂದೆನಿಸುತ್ತದೆ. ಹೀಗಿರುವಾಗ ಕನ್ನಡದ ಕುರಿತು ಯೋಚಿಸುತ್ತಾ ಕೂರಲು ಸಮಯ ಎಲ್ಲಿದೆ ?
ಕಲಿತ ಇಂಗ್ಲೀಷು ಸಾಫ್ಟ್-ವೇರ್ ಕಂಪನಿಗಳಲ್ಲೋ, ಇನ್ಯಾವುದೋ ಕಾರ್ಖಾನೆಗಳಲ್ಲೋ ಒಳ್ಳೆಯ ಕೆಲಸ ಕೊಟ್ಟೀತು. ಅರ್ಥ ಅರಿಯದೆ ಇಂದಿಗೂ ಅನುಸರಿಸಿಕೊಂಡು ಬರುತ್ತಿರುವ, ಜನನದಿಂದ ಮರಣದವರೆಗಿನ ಸಕಲ ಕರ್ಮಗಳಿಂದಾಗಿ ಸಂಸ್ಕೃತವೂ ಸಂಪಾದನೆಗೊಂದು ದಾರಿಯಾದೀತು. ಅಲ್ಪ ಸ್ವಲ್ಪ ತಮಿಳು ತೆಲುಗು ಬಂದುದಾದರೆ ಅಲ್ಲಿಯ ಚಲಚ್ಚಿತ್ರಗಳನ್ನು ಸವಿಯಲಾದೀತು. ಕನ್ನಡ ಪ್ರಾಧ್ಯಾಪಕರು ಕೂಡಾ ಇಂಗ್ಲೀಷು ಕಲಿತು ಕನ್ನಡವನ್ನೂ ಇಂಗ್ಲೀಷಿನಲ್ಲಿ ಕಲಿಸಬೇಕಾದ ಈ ದಿನ ಹಿತ್ತಲ ಗಿಡ ಮದ್ದಲ್ಲ ಸ್ವಾಮಿ, ದಿನಕ್ಕೆರಡು ಸೀನು ಹೆಚ್ಚಿಗೆ ಬಂದರೂ ಅಲೋಪತಿ ಡಾಕ್ಟರರ ಬಳಿ ಓಡುವ ಇಂದಿನ ದಿನಗಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಹೇಗೆ ಹೆಚ್ಚಬೇಕು ಹೇಳಿ.
ಇದಿಷ್ಟು ಕನ್ನಡದ ಬಗ್ಗೆ ಅಭಿಮಾನ ತೋರದವರ ದೃಷ್ಟಿಯಾದರೆ; ಕನ್ನಡವೇ ದೇವರು ಎಂದೋ, ದೇವರಲ್ಲಿ ನಂಬಿಕೆ ಇಲ್ಲವಾದರೆ ಅಥವಾ ಕಡಿಮೆಯಾದರೆ ಕನ್ನಡವೇ ತನ್ನ ತಾಯಿ ಎಂದೋ ಪೂಜಿಸುವ ಕನ್ನಡದ ಕಂದಮ್ಮಗಳಿಗೂ ಕೊರತೆಯಿಲ್ಲ. ಇಂಥ ಕಂದಮ್ಮಗಳು ಶುದ್ಧ ಕನ್ನಡದಲ್ಲಿ ನುಡಿಯಲಾರಂಭಿಸಿದರೆಂದರೆ ಅಲ್ಲಿ ಕನ್ನಡಕ್ಕಿಂತ ಸಂಸ್ಕೃತದ ಅಬ್ಬರ ಹೆಚ್ಚು. ಇವರ ಅಧ್ಯಯನ ಏನಿದ್ದರೂ ಸಾಮಾನ್ಯ ಜನರಿಗೆ ಅರ್ಥವಾಗದ ವ್ಯಾಕರಣದಿಂದ ಶುರುವಾಗಿ ಹಳೆಗನ್ನಡ, ನಡುಗನ್ನಡ ದಾಟಿ ಪ್ರಸ್ತುತಕ್ಕೆ ಬರುವ ವೇಳೆಗೆ ಪಕ್ಕದಲ್ಲಿರುವವ ಸುಸ್ತಾಗಿರುತ್ತಾನೆ. ನೇರವಾಗಿ ಸಾಮಾನ್ಯ ಕನ್ನಡದಲ್ಲೇ ಮಾತನಾಡಿದನೆಂದರೆ ಅವನ ಪಾಂಡಿತ್ಯ, ಭಾಷೆಯ ಮೇಲಣ ಅಭಿಮಾನ ಉಳಿದವರಿಗೆ ತಿಳಿಯುವುದಾದರೂ ಹೇಗೆ ? ಅದಕ್ಕೆ ಪರರಿಗೆ ಅರ್ಥವಾಗದ ದಾರಿಯಲ್ಲಿ ನಾವು ನಡೆಯಬೇಕು. ಆದರೆ ಅಲ್ಲಿ ಸೋತರೆ ಮೂರ್ಖರೆನಿಸುತ್ತೇವೆ, ಗೆದ್ದರೆ ಮಹಾತ್ಮರೆನಿಸುತ್ತೇವೆ. ಇಂಥ ಕಂದಮ್ಮಗಳು ಸಾವಿರಕ್ಕೊಬ್ಬರೋ, ಲಕ್ಷಕ್ಕೊಬ್ಬರೋ ಇದ್ದಾರು. ಪೈಪೋಟಿ ಇಲ್ಲದಿರುವುದರಿಂದ ಎರಡು ಹೊತ್ತಿನ ಊಟಕ್ಕೆ ಮೋಸವಾಗಲಿಕ್ಕಿಲ್ಲ. ಆದರೆ ಅದನ್ನೇ ನಂಬಿ ಹೋದರೆ ಎಷ್ಟು ಜನರ ಹೊಟ್ಟೆ ತುಂಬೀತು ?
ವಸ್ತುಸ್ಥಿತಿ, ಜನರ ಮನಸ್ಥಿತಿ ಇಂತಿರುವಾಗ 'ಕನ್ನಡದ, ಕನ್ನಡ ಚಳುವಳಿಗಳ ಕೂಗು ಮುಟ್ಟಬೇಕಾದ್ದು ಎಲ್ಲಿಗೆ ? ನಿಜವಾಗಿ ಕನ್ನಡಾಭಿಮಾನ ಎಂದರೇನು ? ಭಾಷೆ ಒಂದು ಸಂವಹನ ಮಾಧ್ಯಮವಾಗಿರುವಾಗ ಅಲ್ಲಿ ಸಂವಹನ ಮುಖ್ಯವೇ? ಅದಕ್ಕಿಂತ ಹೆಚ್ಚಿನ ಅಭಿಮಾನವೇ?' ಎಂಬಿತ್ಯಾದಿ ಉತ್ತರ ಸಿಗದ ಪ್ರಶ್ನೆಗಳಲ್ಲಿ ತೊಳಲುತ್ತಾ ಸದ್ಯಕ್ಕೆ ವಿರಮಿಸುತ್ತೇನೆ.

No comments:
Post a Comment